ದೇಶಹಳ್ಳಿ ಜಿ.ನಾರಾಯಣ ಇವರು ೧೯೨೩ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ಸಣ್ಣಮ್ಮ; ತಂದೆ ಗಿರಿಗೌಡ. == ಪತ್ರಿಕೋದ್ಯಮ == ದೇಶಹಳ್ಳಿ ಜಿ.ನಾರಾಯಣರು ೧೯೫೧ರಲ್ಲಿ ‘ವಿನೋದ’ ಹಾಸ್ಯಪತ್ರಿಕೆ ಪ್ರಾರಂಭಿಸಿ ಯಶಸ್ವಿಯಾಗಿ ನಡೆಯಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಖಾದಿ ಧರಿಸಿ, ಗಾಂಧಿವಾದಿಗಳಾಗಿದ್ದಾರೆ. ಅನೇಕ ಕನ್ನಡ ಸಂಘ-ಸಂಸ್ಥೆಗಳಲ್ಲಿ ಸಕ್ರೀಯ ಪಾತ್ರವಹಿಸುತ್ತಿದ್ದಾರೆ. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿ ರಾಜ್ಯ ಸರ್ಕಾರವು ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿದೆ. == ಸಾಹಿತ್ಯ == ಇವರು ರಚಿಸಿರುವ ಕೆಲವು ಕೃತಿಗಳು: ಅಕ್ಷರವ ನೀವ್ ಕಲಿಯಿರಿ (ಶತಕ) ಮಲೇರಿಯಾ ಹಾವಳಿ ಕಬ್ಬಿನ ಕಥಾಂತರ ರಾಷ್ಟ್ರೀಯ ಪದಗಳು ಹೆಚ್ಚು ಬೆಳೆಯನ್ನು ಬೆಳೆಯಿರಿ == ಸಾಧನೆ == ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಆಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಗೋಕಾಕ ಸಮಿತಿಯ ಸದಸ್ಯರಾಗಿದ್ದರು. ಜಾನಪದ ಲೋಕ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ. ಸಾಹಿತ್ಯ ಸಂವರ್ಧಕ ಟ್ರಸ್ಟ್ ಧರ್ಮದರ್ಶಿಯಾಗಿದ್ದಾರೆ.